ಮಂಗಳವಾರ, ಅಕ್ಟೋಬರ್ 3, 2017


ಮತ್ತೊಂದು ಬ್ಲಾಗು, ಮತ್ತೊಂದು ಪುರಾಣ :) ಇಲ್ಲ ಹಾಗೇನಿಲ್ಲ, ನಿಮಗೆ ಈ ಒಂದು ಚಿಕ್ಕದಾಗಿರೋ ಬ್ಲಾಗು ಇಷ್ಟ ಆದ್ರೂ ಆಗಬಹುದು,   ಇಲ್ಲ ಅಂದ್ರೆ ಈ ಬ್ಲಾಗ್ ಅಥವಾ ಕಥೆ ಪುರಾಣ ಓದಿ ಮುಗಿಸೋವರೆಗೆ ನೀವು ಸ್ವಲ್ಪ ಭಾವುಕರಾಗಬಹುದು ಕೂಡ, ನೋಡೋಣ.

ಇದು ನಮ್ಮ ಅಪ್ಪನ ಬಗ್ಗೆ ನೆನಪಾದಾಗ ಬರೆದಿದ್ದು, ಅವರು ಬ್ರೈನ್ ಸ್ಟ್ರೋಕ್ ಆಗಿ ಬಿದ್ದು ಆಮೇಲೆ ಒಂದು ವಾರ ಅಡ್ಮಿಟ್ ಆಗಿ ನಮ್ಮನೆಲ್ಲ ಬಿಟ್ಟು ಹೋದ ಮೇಲೆ - ಈಗ ಒಂದೂವರೆ ವರ್ಷ್ ಆಗುತ್ತೆ, ಅದು ಅಮೇರಿಕಾದಲ್ಲಿ ಇಷ್ಟು  ದೂರ ಇರೋವಾಗ, ಮಗಳು ಒಮ್ಮೊಮ್ಮೆ ಅಜ್ಜನ ಬಗ್ಗೆ ಕೇಳೋವಾಗ ಮಲೆನಾಡಿನಲ್ಲಿ ನಮ್ಮೋರು ಸಿರ್ಸಿಯಲ್ಲಿ ಕಳೆದಿರೋ ಆ ದಿನಗಳು ನೆನಪಾಗುತ್ತೆ ಕಣ್ಣು ಆಟೋಮ್ಯಾಟಿಕ್ ಆಗಿ ತೇವ ಆಗುತ್ತೆ.

ಇದೇನು ಗಿಲ್ಟಿ ಬ್ಲಾಗ್ ಅಲ್ಲ, ಆದರೆ ನಿಜ ಹೇಳ್ತಿನಿ, ಅಪ್ಪ ಅಮ್ಮ  ಒಂದು  ಇಂಟರ್ನ್ಯಾಷನಲ್ ಕಾಲ್ ದೂರ ಇರೋವಾಗ ತುಂಬಾ ಬ್ಯುಸಿ ಆಗಿ ಏನಾದ್ರು ರೀಸನ್ ಕೊಡ್ತಿವಿ, ಅದೇ ಅವರು ನಮ್ಮಿಂದ  "ಟೋಟಲಿ" unreachable  ಆದಾಗ ಎಷ್ಟೇ  ಕಾಸ್ಟ್ಲಿ ಫೋನ್ ತೆಗೊಂಡು ಫೋನ್ ಮಾಡಿದ್ರು ಮಾತಾಡಕೆ ಆಗಲ್ಲ. ಸಡನ್ನಾಗಿ ಅನ್ಸುತ್ತೆ ಇಷ್ಟೆಲಾ ಓಡಾಟ ಮಾಡಿ ನಮ್ಮನ್ನ ಹುಟ್ಟಿಸಿದ ಅಪ್ಪ ಅಮ್ಮಂದಿರ (ಎಷ್ಟೋ ಕಷ್ಟ ಪಟ್ಟು ಓದಿರಿಸ್ತಾರೆ, ಎರಡು ಹೊತ್ತು ಊಟ ಹಾಕಿರಿಸ್ತಾರೆ, ಹಬ್ಬ ಬಂದಾಗ ಬಟ್ಟೆ ಕೊಡಿಸಿರಿಸ್ತಾರೆ) ಮಕ್ಕಳಾದ ನಾವು ಸ್ವಲ್ಪ ಲೈಫಲ್ಲಿ ರಿಚೇಬಲ್  ಆದಾಗ, ಅವರಿಗೆ unreachable ಆಗಿ ಬಿಡ್ತಿವಿ, ಎಷ್ಟು ಬೇಗ ಮನುಷ್ಯ ಕಠೋರ ಆಗಿ ಬಿಡತಾನಲ್ವ, career , ದುಡ್ಡು, ಕಾರು  ಅನ್ನೋ ಅನಿವಾರ್ಯ ಜೀವನ ಶೈಲಿ ಹಿಂದೆ ಓಡುತ್ತ ಓಡುತ್ತ  ನಮ್ಮ ತಂದೆ ತಾಯಿಗೆ ಸಿಗದಷ್ಟು ದೂರ ಹೋಗತೀವಿ, ಅವರು ತಿರುಗಿ ನೋಡಿದಾಗ ಅವರಿಗೆ ನಾವು ಒಂದು ಮರೀಚಿಕೆ, ನಾವು ತಿರುಗಿ ನೋಡಿದಾಗ ಅವರು ಒಂದು ನೆನಪು ಅಷ್ಟೇ .

ಇನ್ನು ನೆನಪಿದೆ, ಅಪ್ಪ ಫ್ರೈಡೆ ಕಾಲ್ ಮಾಡಿ ಏನೋ ಕೇಳಿದ್ರು ನಾನು ಅವಾಗ ಯಾವುದೊ escalation ಕಾಲಲ್ಲಿ ಇದ್ದೆ, ಯಾವುದೊ ಕಸ್ಟಮರ್ ಇಶ್ಯೂ ಇತ್ತು,  ಏನೋ ಹೇಳಿ ಕಾಲ್ ಕಟ್ ಮಾಡಿದೆ, ಆಮೇಲೆ ಕಾಲ್ ಮಾಡ್ತಿನಿ ಅಂದೆ , ಅದು ಆಗಿದ್ದು ಶುಕ್ರವಾರ, ಹಾಗೆ ಮಲಗಿರೋವಾಗ ಬೆಳೆಗ್ಗೆ ೧:೩೦ ಕ್ಕೆ ನನ್ನ ತಮ್ಮ ಕಾಲ್ ಮಾಡಿದ, ಅಣ್ಣ ಈಗ್ಲೇ ಸಿರ್ಸಿಗೆ ಹೋಗ್ಬೇಕು, ಅಪ್ಪ ಬ್ರೈನ್ ಸ್ಟ್ರೋಕ್ ಆಗಿ ಬಿದ್ದಿದಾರೆ ಅಂತ,ಆ ಅರ್ಧ ಮರ್ದ ನಿದ್ದೆಯಲ್ಲಿ ಇದ್ದೆ, ಇನ್ನೊಂದ್ಸಲ ಕೇಳ್ದೆ  "ನಿಜಾನಾ" ಅಂತ, ಅವನು ಹೌದು ಅಂದ, ಯಾರೋ ಪಕ್ಕದ ಮನೆಯವರು ನನ್ನ ಫೋನೇನ ರೀಚ್ ಮಾಡಿದ್ರು ಆಗಿಲ್ಲ ಆಮೇಲೆ ಅವನಿಗೆ ಕಾಲ್ ಮಾಡಿದ್ರು, ಅಮ್ಮ ನೆರೆಕರೆಯವರ ಸಹಾಯದಿಂದ ಅಪ್ಪನನ್ನ ಅಲ್ಲೇ ಪಕ್ಕದಲ್ಲಿರೋ ಒಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿರುತ್ತಾರೆ ( ಆ ಆಸ್ಪತ್ರೆ ಯಲ್ಲಿ ಏನು ಸೌಲಭ್ಯ ಇಲ್ಲ ಅಂತ ಆಮೇಲೆ ಗೊತ್ತಾಯಿತು), ಅವರು ನಮ್ಮನ್ನೆಲ್ಲ ಬಿಟ್ಟು ಹೋಗೋಕೆ ಆ ಆಸ್ಪತ್ರೆನೂ ಒಂದು ಕಾರಣವಾಯಿತು.

ಕಾರಲ್ಲಿ ನಾವೆಲ್ಲ ೮ ಘಂಟೆ ಡ್ರೈವ್ ಮಾಡಿಕೊಂಡು ಬೆಂಗಳೂರಿಂದ ಸಿರಸಿಗೆ ಹೋಗೋವಾಗ ದಾರಿಯಲ್ಲಿ ಇದ್ದ ಆ ಮಂಜು ಕವಿದ , ಆ ೨ ಗಂಟೆ ಬೆಳಿಗ್ಗೆಯ ಬಿಕೋ ಅಂತಿದ್ದ ರೋಡು, ನನ್ನನ ನೋಡಿ ನಗ್ತಾ ಇದ್ದ ಹಾಗಿತ್ತು, ಯಾಕೋ ಆ ರಸ್ತೆ ಮುಗಿಯಲಾರದ ಗಿಲ್ಟಿ ಫೀಲಿಂಗಿನ ಸಮುದ್ರದ ನಡುವೆ ನಿಂತ ಹಾಗಿತ್ತು, ಯಾಕೋ ಮನಸ್ಸು ತುಂಬಾನೇ ಅನೂಜ್ವಲ್ ಆಗಿ ಹೆವಿ ಆಗಿತ್ತು, ಪಕ್ಕ ತಿರುಗಿ ನೋಡ್ದೆ, ತಮ್ಮ ಮುಂದೆ ವೇಗವಾಗಿ ಮಾಯವಾಗುತಿದ್ದ ಆ ಬಿಳಿ ಗೆರಗಳನ್ನೇ (ಲ್ಯಾನ್ಸ್) ನೋಡತಾ ಇದ್ದ, ಮಗಳು ಹಿಂದಿನ ಸೀಟಲ್ಲಿ ಹೆಂಡತಿಯ ಜಕ್ಕೆಯಲ್ಲಿ ನಿದ್ರಾವಶವಾಗಿದ್ದಲ್ಲು, ಅಮ್ಮ್  ಫೋನೆಯಲ್ಲಿ ಮಾತಾಡಿ ನಮಗೆ ಧೈರ್ಯ ತುಂಬುತ್ತ ಇದ್ದರು, "ಏನು ಆಗಲ್ಲ ನೀವೆಲ್ಲ ಜಾಗ್ರತೆಯಲ್ಲಿ ಬನ್ನಿ".

ಆ ಮಂಜು ಕವಿದ ರೋಡು ನನ್ನ ಕಾರಿನ ಹೆಡ್ಲೈಟು ಮೂವಿ ಪ್ರೊಜೆಕ್ಟರ್ ಥರ ಅಪ್ಪನೊಂಟ್ಟಿಗೆ ಕಳೆದ ಬಾಲ್ಯದ ಫ್ಲಾಶ್ ಬ್ಯಾಕ್ ತೋರಿಸ್ತಾ ಇತ್ತು, ಕಾಲು ರೋಬೋಟ್ ಥರ accelarator ನ ಒತ್ತಿ ಕಾರು ಮುಂದೆ ಹೋಗ್ತಿತ್ತು.

ಬೆಳಗ್ಗಿನ ಜಾವ ಊರು ಮುಟ್ಟಿ ಸಿದ ಆಸ್ಪತ್ರೆಗೆ ಹೋಗಿ ಅಪ್ಪನ ನೋಡಿ ಅಯ್ಯೋ ಅನ್ಸಿತ್ತು, ಆ ಆಸ್ಪತ್ರೆಯ doctor ಅವರಿಗೆ ಗ್ಲೋಕೋಸ್ ಹಾಕಿ ಇಟ್ಟಿದ್ರು, ಎಂಥ ವರ್ಸ್ಟ್ ಹಾಸ್ಪಿಟಲ್ ಇರ್ಬೇಕು, ಬ್ರೈನ್ ಸ್ಟ್ರೋಕೆಗೆ ಗ್ಲುಕೋಸ್ ಎಲ್ಲ ಲೈಫ್ ಸೇವಿಂಗ್ ಡ್ರಗ್ಸ್ ಕೊಡ್ಬೇಕಿತ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ